ದೇವರ ಪವಿತ್ರವಾದ ಪಾದಗಳೇ ನಮ್ಮ ಕಣ್ಣುಗಳು
ದೇವರು – ಗುರು – ತಂದೆ – ತಾಯಿ
ಗುರುವು ಮಾತ್ರವೇ ದೇವರ ಬಳಿಗೆ ಕರೆದೊಯ್ಯಬಹುದು
ಗುರುವನ್ನು ಗುರುತಿಸಲು ತಂದೆಯು ಸಹಾಯ ಮಾಡುವನು
ತಂದೆಯನ್ನು ಗುರುತಿಸಲು ತಾಯಿಯು ಸಹಾಯ ಮಾಡುವಳು
ಅವತಾರಪುರುಷರಾದ ರಾಮ ಮತ್ತು ಕೃಷ್ಣರು ಕೂಡ ಗುರುವಿನ ಒಳ್ಳೆಯ ಶಿಷ್ಯರಾಗಿದ್ದರು. ಇದು ಗುರುವಿನ ಮೌಲ್ಯವನ್ನು ಹೇಳುತ್ತದೆ.
ಸಾಮಾನ್ಯ ಮನುಷ್ಯರಾದ ನಮಗೆ ಕೂಡ ಜೀವನದಲ್ಲಿ ಗುರುವಿನ ಅವಶ್ಯಕತೆ ಇದೆ. ಆದ್ದರಿಂದ ದೇವರನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳಲು ವಲ್ಲಲಾರರು ಹೇಳಿದಂತೆ ನಿಮ್ಮ
ಕಣ್ಣುಗಳ ಮಧ್ಯ ಭಾಗವನ್ನು ತೆರೆಯಬಲ್ಲ ಒಬ್ಬ ಗುರುವನ್ನು ಅರಸಿ.
ತಿರುವಡಿ ಎಂದರೆ ಭಗವಂತನ ಪವಿತ್ರವಾದ ಪಾದಗಳು. ನಮ್ಮ ದೇಹದಲ್ಲಿರುವ ಭಗವಂತನ ಪವಿತ್ರವಾದ ಪಾದಗಳೇ ನಮ್ಮ ಕಣ್ಣುಗಳಲ್ಲಿರುವ ಬೆಳಕು.
ದೀಕ್ಷೆಯ ಮೂಲಕ ಶಿಷ್ಯನು ತನ್ನ ಕಣ್ಣುಗಳಲ್ಲಿ ದೈವಿಕ ಪ್ರಜ್ಞೆಯನ್ನು ಪಡೆಯುತ್ತಾನೆ.
ಭಕ್ತಿ, ಕರ್ಮ ಮತ್ತು ಯೋಗಗಳಲ್ಲಿ, ಮನಸ್ಸಿನಲ್ಲಿ ಕ್ರಿಯೆಯನ್ನು ಮಾಡಬೇಕಾಗುತ್ತದೆ. ಆದರೆ, ಆಧ್ಯಾತ್ಮಿಕವಾದ ಜ್ಞಾನಮಾರ್ಗದಲ್ಲಿ ಮನಸ್ಸಿನಲ್ಲಿ ಯಾವುದೇ ಕ್ರಿಯೆ ಇರುವುದಿಲ್ಲ.
ಅದು ತೆರೆದ ಕಣ್ಣುಗಳಿಂದ ದೇವರ ಪಾದಪದ್ಮಗಳಲ್ಲಿ (ನಮ್ಮ ಕಣ್ಣುಗಳಲ್ಲಿ ಇರುವ ದೈವಿಕ ಬೆಳಕು) ಶರಣಾಗುವುದಾಗಿದೆ.
ಜ್ಞಾನ – ಯೋಗ – ಕರ್ಮ – ಭಕ್ತಿ
ಭಕ್ತಿ, ಕರ್ಮ ಮತ್ತು ಯೋಗಗಳು ಜ್ಞಾನದ ಮುಂಚಿನ ಮೆಟ್ಟಿಲುಗಳು.